ಹುಬ್ಬಳ್ಳಿ: 110 ಕೆವಿ ವಿದ್ಯುತ್ ಉಪಕೇಂದ್ರ ರಾಮನಕೊಪ್ಪದಲ್ಲಿ 2ನೇ ತ್ರೈಮಾಸಿಕ ನಿರ್ವಹಣಾ ಕಾರ್ಯದ ನಿಮಿತ್ತ ಸೆ. 11 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಅಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಇಂಡಸ್ಟ್ರಿಯಲ್, ಚಬ್ಬಿ, ಪಾಲಿಕೊಪ್ಪ ಎನ್‌ಜೆವೈ, ಅರಳಿಕಟ್ಟಿ, ದ್ಯಾಮಾಪುರ, ವರೂರ, ಮುತ್ತಳ್ಳಿ, ತಡಸ, ರಾಮನಕೊಪ್ಪ, ಇನಾಮ್‌ವೀರಾಪುರ ಹಾಗೂ ಮಲಾಲಿ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಲು ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.