ಗಣೇಶೋತ್ಸವಕ್ಕೆ ಬೆಂಗಳೂರಿನಿಂದ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಇಲ್ಲೊಂದು ಬಿಗ್ ಶಾಕ್ ಇದೆ. ವಿನಾಯಕ ಚೌತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇರುವ ಸಾಕಷ್ಟು ಜನರು ತಮ್ಮ ಹಳ್ಳಿಗಳಿಗೆ ಹೋಗಿ ಆಚರಣೆ ಮಾಡುತ್ತಾರೆ. ಆದರೆ ಊರಿಗೆ ಹೊರಟವರ ಜೇಬಿನಿಂದ ದೊಡ್ಡ ಮೊತ್ತದಲ್ಲಿ ಹಣ ಪಡೆಯಲು ಖಾಸಗಿ ಬಸ್ಗಳು ಶುರು ಮಾಡಿವೆ. ಆಗಸ್ಟ್ 27 ರಂದು ಗಣೇಶ ಹಬ್ಬಕ್ಕೂ ಒಂದು ದಿನ ಮೊದಲೇ ಅಂದರೆ ಆಗಸ್ಟ್ 26ಕ್ಕೆ ಗೌರಿ ಹಬ್ಬದ ದಿನವೇ ಬಸ್ ಪ್ರಯಾಣ ಏರಿಕೆ ಮಾಡಲಾಗಿದೆ. ಗಣೇಶನ ಹಬ್ಬಕ್ಕೆ ಜನ ಸಾಮಾನ್ಯರಿಗೆ ದರ ಏರಿಕೆಯ ಬರೆ ಎಳೆಯಲಾಗುತ್ತಿದೆ. ಇನ್ನೊಂದು ಕಡೆ ಕೆಎಸ್‌ಆರ್‌ಟಿಸಿ ಹಬ್ಬದ ಪ್ರಯುಕ್ತ ಹೆಚ್ಚುವರಿ ಬಸ್‌ಗಳನ್ನು ಬಿಡಲು ಮುಂದಾಗಿದೆ.