ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮೂರ್ತಿಗಳ ವಿಸರ್ಜನೆಗೆ ಬೆಂಗಳೂರಿನ ವಿವಿಧ ಕೆರೆಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಗಸ್ಟ್ 27ರಂದು ಮಧ್ಯಾಹ್ನ 2 ಗಂಟೆಯಿಂದಲೇ ನಗರದ ಯಡಿಯೂರು, ಹಲಸೂರು, ಸ್ಯಾಂಕಿ ಕೆರೆ ಸೇರಿದಂತೆ 41 ಕೆರೆಗಳಲ್ಲಿ ವಿಸರ್ಜನಾ ಕಾರ್ಯಕ್ರಮಗಳಿಗೆ ಸಿದ್ಧತೆ ಭರದಿಂದ ಸಾಗಿದೆ. ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಅನಾಹುತಗಳಿಗೆ ಎಡೆ ಮಾಡಿಕೊಡದಂತೆ ಪ್ರತಿ ಕೆರೆ, ಕಲ್ಯಾಣಿ ಬಳಿಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಇನ್ನು ಗಣೇಶ ವಿಸರ್ಜನೆ ವೇಳೆ ಭದ್ರತೆ ದೃಷ್ಟಿಯಿಂದ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ನುರಿತ ಈಜುಗಾರರು ಹಾಗೂ ಸ್ವಯಂ ಸೇವಕರನ್ನ ನಿಯೋಜಿಸಲಾಗಿದೆ.