ಹಾಸನ: ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಇಂದು ಮೇಯರ್ ಹೇಮಲತಾ ಹೇಮಲತಾ ಕಮಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮೊದಲ ವಿಶೇಷ ಸಭೆ ನಡೆಯಿತು. ಮೊದಲ ಸಭೆಯಲ್ಲಿ ಮೇಯರ್ ಹೇಮಲತಾ ವಿವಿಧ ವಿಚಾರಗಳ ಬಗ್ಗೆ ಸದಸ್ಯರು ನಡೆಸಿದ ಗದ್ದಲ ನಿಯಂತ್ರಿಸುವಲ್ಲಿ ಮೇಯರ್ ಹರಸಾಹಸ ಪಟ್ಟರು. ಈ ಹಿಂದಿನ ನಡವಳಿ ಬಗ್ಗೆ ಚರ್ಚೆ ನಡೆಸಲು ಸದಸ್ಯರು ಮುಂದಾದಾಗ ಹಿಂದಿನ ನಡವಳಿಕೆ ಬಗ್ಗೆ ಚರ್ಚೆ ಬೇಡ ಇಂದಿನ ವಿಶೇಷ ಸಭೆಯಲ್ಲಿ ನಡವಳಿ ಬಗ್ಗೆ ಚರ್ಚೆ ಬೇಡ. ಇಂದು ಕೆಲ ಪ್ರಮುಖ ತುರ್ತು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಲಾಗಿದೆ ಎಂದರು. ಇದೆ ವೇಳೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಕಾಯಿತು.