ಬಿಬಿಎಂಪಿಯ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರ ನಿರ್ದೇಶನದಂತೆ ಬೆಂಗಳೂರು ಪೂರ್ವ ವಲಯ ವ್ಯಾಪ್ತಿಯ ಹಲಸೂರು ಕೆರೆಯಲ್ಲಿ ಆಗಸ್ಟ್ 30ರಂದು ಮಧ್ಯಾಹ್ನ 4 ಗಂಟೆಗೆ ಹೂಳೆತ್ತುವ ಕಾರ್ಯ ನಡೆಸಲಾಯಿತು. ಪುಲಕೇಶಿನಗರ ವಿಭಾಗದ ಸುಲ್ತಾನಪಾಳ್ಯ ಹಾಗೂ ಹೆಚ್.ಬಿ.ಆರ್ ಲೇಔಟ್ ಉಪವಿಭಾಗ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ಹಾಗೂ ಬ್ಯಾನರ್ ಗಳನ್ನು ತೆರವುಗೊಳಿಸಲಾಯಿತು.ವಲಯ ವ್ಯಾಪ್ತಿಯ ಹೆಚ್.ಬಿ.ಆರ್ ಲೇಔಟ್ ಹಾಗೂ ನಾಗಾವರ ಪ್ರದೇಶಗಳಲ್ಲಿ ಟ್ರ್ಯಾಕ್ಟರ್ ಬಳಸಿ ರಸ್ತೆ ಇಕ್ಕೆಲಗಳಲ್ಲಿನ ತ್ಯಾಜ್ಯ ಹಾಗೂ ಕಟ್ಟಡ ಭಗ್ನಾವಶೇಷಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.