ಈದ್ ಮಿಲಾದ್ ಹಬ್ಬವನ್ನು ಹುಣಸೂರು ನಗರದಲ್ಲಿ ಮುಸ್ಲಿಂ ಬಾಂಧವರು ಸಂಭ್ರಮ-ಸಡಗರದಿಂದ ಆಚರಿಸಿದರು. ನಗರದ ವಿವಿಧ ಬಡಾವಣೆ ಹಾಗೂ ಗ್ರಾಮೀಣ ಭಾಗಗಳಿಂದ ಆಗಮಿಸಿದ್ದ ಮುಸ್ಲಿಂ ಬಾಂಧವರು ನಗರದ ಶಬ್ಬೀರ್ ನಗರದ ಮಸೀದಿ ಬಳಿಯಲ್ಲಿ ಸಮಾವೇಶಗೊಂಡು, ಮದ್ಯಾಹ್ನ ೩.೩೦ಕ್ಕೆ ಶಬ್ಬೀರ್‌ನಗರದಿಂದ ಘೋಷಣೆ ಕೂಗುತ್ತಾ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಈದ್ಗಾ ಮೈದಾನದಲ್ಲಿ ಸಮಾವೇಶಗೊಂಡರು. ಮೆರವಣಿಗೆಯಲ್ಲಿ ವಿವಿಧ ಮಸೀದಿಗಳವರು ಆಕರ್ಷಕ ಮೆಕ್ಕಾ-ಮದೀನಾ ಹಾಗೂ ಮಸೀದಿ ಸ್ಥಬ್ದಚಿತ್ರ ಗಮನ ಸೆಳೆಯಿತು. ನಂತರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮೌಲ್ವಿಗಳು ಧಾರ್ಮಿಕ ಪ್ರವಚನ, ನಂತರ ಕವಾಲಿ ನಡೆಸಿಕೊಟ್ಟರು.