ಈ ಹಿಂದೆ ಬಿಜೆಪಿ ಸರ್ಕಾರ ಆಢಳಿತದಲ್ಲಿ ಇರುವಾಗ ಭ್ರಷ್ಟಾಚಾರ ಮುಕ್ತ ಮಾಡುವ ಬಗ್ಗೆ ಮಾತನಾಡುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತರು ಕಾರ್ಯಕರ್ತರಿಂದಲೇ ಸದ್ಯ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಅಕ್ರಮ ದಂದೆಗಳು, ಭ್ರಷ್ಟಾಚಾರಗಳು ನಡೆದಿವೆ ಎಂದು ಹಿಂದೂ ಮುಖಂಡೆ ದಿವ್ಯಾ ಹಾಗರಗಿ ಆರೋಪ ಮಾಡಿದ್ದಾರೆ. ಶೆನಿವಾರ 12 ಗಂಟೆಗೆ ಈ ಕುರಿತು ಮಾತನಾಡಿದ ಅವರು, ಇಡಿ ಕಲ್ಬುರ್ಗಿ ಜಿಲ್ಲೆಯೇ ಭ್ರಷ್ಟಾಚಾರದ ತಾಣವಾಗಿ ಬದಲಾಗಿದೆ. ಹನಿ ಟ್ರ್ಯಾಪ್, ಎಕ್ಸಾಮಿನೇಷನ್ ಗೋಲಮಾಲ್, ಡ್ರಗ್ಸ್ ಮಾಫಿಯಾ, ಅಕ್ಕಿ ಕಳ್ಳತನ, ಅಕ್ರಮ ಮರಳು ದಂದೆಯಂತಹ ಕೆಲಸಗಳನ್ನ ಮಾಡುತ್ತಿದ್ದಾರೆಂದು ಆರೋಪ ಮಾಡಿದರು.