ತುಮಕೂರು ವಿವಿಗೆ ಸಿದ್ದಗಂಗಾ ಶ್ರೀಗಳ ಹೆಸರು ಇಡುವ ವಿಚಾರಕ್ಕೆ ಕುರಿತಂತೆ ಕೈಗಾರಿಕ ಸಚಿವ ಎಂಬಿ ಪಾಟೀಲ್, ಭಾನುವಾರ ಮಧ್ಯಾಹ್ನ ೨ಗಂಟೆ ಸುಮಾರಿಗೆ ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತುಮಕೂರಿನ ಸಿದ್ದಗಂಗಾ ಶ್ರೀಗಳು ಲಕ್ಷಾಂತರ ಮಕ್ಕಳ ಭವಿಷ್ಯಕ್ಕೆ ಕಾರಣರಾದರು. ಅವರ ಹೆಸರು ತುಮಕೂರು ವಿವಿಗೆ ಇಡಲು ಸೂಕ್ತ ಆಗುತ್ತೆ. ಸಂಪುಟ ಸಭೆಯಲ್ಲಿ ಈ ವಿಷಯ ಬಂದಾಗ ಚರ್ಚೆ ಆಗುತ್ತದೆ. ನಾನೂ ಮಾತನಾಡುವೆ. ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರ ಭಾರತ ರತ್ನ ಕೊಡಬೇಕು ಅಂತಾ ಚರ್ಚೆ ಆಗಿದೆ. ಅಂತಹ ಉತ್ತಮ ಕೆಲಸಗಳು ಯಾರು ಮಾಡಿಲ್ಲ. ನಮ್ಮ ಮೆಟ್ರೋಗೆ ಬಸವಣ್ಣ ಅವರ ಹೆಸರು ಇಡಬೇಕು. ಆ ಪ್ರಸ್ತಾವನೆಯೂ ಕೂಡ ಜೀವಂತವಾಗಿದೆ ಎಂದರು.