ಜಿಲ್ಲೆಯಲ್ಲಿ ಅತಿವೃಷ್ಠಿ ಮತ್ತು ಪ್ರವಾಹದಿಂದ ಹಾನಿಯಾದ ಬೆಳೆಗೆ ಪರಿಹಾರ ಸೇರಿದಂತೆ ವಿವಿಧ ರೈತಪರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಸೇರಿದಂತೆ ಹಲವು ರೈತಪರ ಸಂಘಟನೆಗಳು ಜಂಟಿಗಾಗಿ ಎಂಟು ದಿನದ ಸಾಮೂಹಿಕ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಕಲಬುರಗಿ ಚಂದ್ರಶೇಖರ ಆಜಾದ್ ಮೈದಾನದಲ್ಲಿ ನಡೆಯುವ ಮಹಾ ಚಳವಳಿಯಲ್ಲಿ ರೈತರ ಬಾಕಿ ಬೆಳೆಸಹಾಯ ಧನ, ರೈತರ ಸಾಲಮನ್ನಾ ಮತ್ತು ರೈತರ ಉತ್ಪನ್ನಗಳಿಗೆ ಎಮ್‌ಎಸ್‌ಪಿ ನಿಗಧಿ ಮಾಡಲು ಆಗ್ರಹಿಸಿದರು. ಇಂದು ಸೆಪ್ಟೆಂಬರ್ 1 ರಿಂದ ಸೆ. 8ರವರೆಗೆ ಸಾಮೂಹಿಕ ಧರಣಿ ಮುಂದುವರೆಯಲಿದೆ ಎಂದು ಸೋಮವಾರ 5 ಗಂಟೆಗೆ ರೈತ ಮುಖಂಡ ಭೀಮಶೆಟ್ಟಿ ಯಂಪಳ್ಳಿ ತಿಳಿಸಿದರು.