ಯಲ್ಲಾಪುರ : ಕಳಚೆ ಸಹ್ಯಾದ್ರಿ ವಿವಿದೋದ್ದೇಶ ಪ್ರಾಥಮಿಕಗ್ರಾಮೀಣಕೃಷಿ ಸಹಕಾರಿ ಸಂಘವು ಉತ್ತಮ ಪ್ರಗತಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ 50,39,184 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಉಮೇಶ ಭಾಗ್ವತ್ ಹೇಳಿದರು. ಅವರು ಪಟ್ಟಣದ ಎಪಿಎಮ್‌ಸಿ ಆವಾರದಲ್ಲಿರುವ ಸಂಘದ ಕಾರ್ಯಾಲಯದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಕಳಚೆ ಪ್ರಧಾನ ಕಚೇರಿ ಸೇರಿದಂತೆ ವಿವಿಧೆಡೆ 3 ಶಾಖೆಗಳಿವೆ. ಕಳೆದ ಮೂರು ವರ್ಷದ ಹಿಂದೆ ಭೂಕುಸಿತ ಉಂಟಾಗಿ ನೆಲೆ ಕಳೆದುಕೊಂಡು ಬೆಳೆಹಾನಿಯಾಗಿ ಸಂಕಷ್ಟದಲ್ಲಿದ್ದರೂ ಸದಸ್ಯರು ಮರುಪಾವತಿ ಮಾಡಿ ಸಹಕಾರ ನೀಡಿದ್ದರಿಂದ ಸಂಘ ಲಾಭದಲ್ಲಿದೆ. 89.67 ರಷ್ಟು ಸಾಲ ವಸೂಲಾಗಿದೆ ಎಂದರು