ಸರ್ಕಾರಿ ಶಾಲಾ ಮಕ್ಕಳ ಗಮನಕ್ಕೆ ಶಿಕ್ಷಣ ಇಲಾಖೆ ಮಹತ್ವದ ಚರ್ಚೆ ನಡೆಸುತ್ತಿದೆ. ಈ ಪ್ರಸಕ್ತ ಸಾಲಿನಿಂದ ದ್ವಿತೀಯ ಪಿಯುಸಿ ಪರೀಕ್ಷಾ ಶುಲ್ಕ ಏರಿಕೆ ಮಾಡಲು ತಯಾರಿ ನಡೆಸುತ್ತಿದೆ. ಪ್ರತಿ ವರ್ಷ 675 ಪರೀಕ್ಷಾ ವೆಚ್ಚ ಒಬ್ಬ ವಿದ್ಯಾರ್ಥಿಗೆ ತಗಲುತ್ತಿತ್ತು ಶಿಕ್ಷಣ ಇಲಾಖೆ ಮಕ್ಕಳಿಂದ 400 ರೂಪಾಯಿ ಪರೀಕ್ಷಾ ಶುಲ್ಕವಾಗಿ ಪಡೆಯುತ್ತಿತ್ತು ಉಳಿದ ಹೆಚ್ಚುವರಿ 275 ಸರ್ಕಾರ ಬರಿಸುತ್ತಿತ್ತು ಆದರೆ ಈ ವ್ಯತ್ಯಯ ಸರಿದೂಗಿಸುವುದಕ್ಕೂಸ್ಕರ ಶಿಕ್ಷಣ ಇಲಾಖೆ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಲು ಸಭೆ ನಡೆಸುತ್ತಿದೆ. ಸಪ್ಟೆಂಬರ್ 4 ಸಂಜೆ 7:00ಯ ಸುಮಾರಿಗೆ ಈ ವಿಚಾರಕ್ಕೆ ಸಂಬಂಧಪಟ್ಟ ಸಭೆ ಆಗಿದೆ.