ಒಳ ಮೀಸಲಾತಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಘೋಷಣೆ ಮಾಡಿರುವುದು ಮತ್ತು ರಾಷ್ಟ್ರೀಯ ಜನಗಣತಿ ಹಾಗೂ ಕಾಲಕಾಲಕ್ಕೆ ಮೀಸಲಾತಿ ಆಯೋಗವು ಮಾಡಬಹುದಾದ ಶಿಫಾರಸ್ಸಿನ ಹಾಗೂ ಜನಸಂಖ್ಯೆ ಆಧಾರಿತ ತಿದ್ದುಪಡಿಗೆ ಒಳಪಟ್ಟು ಒಳ ಮೀಸಲಾತಿ ನಿಗದಿಪಡಿಸಿರುವುದು ಸ್ವಾಗತಾರ್ಹ. ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇಕಡ 1 ರಷ್ಟನ್ನು ಮೀಸಲಾತಿ ನಿಗದಿಗೊಳಿಸಲು ಛಲವಾದಿ ಸಮುದಾಯ ಒತ್ತಾಯಿಸುತ್ತದೆ ಎಂದು ಮಹಾಸಭಾದ ರಾಜ್ಯಾಧ್ಯಕ್ಷ ಹೆಚ್.ಕೆ.ಬಸವರಾಜ್ ತಿಳಿಸಿದರು. ಬಳ್ಳಾರಿ ನಗರದ ಪತ್ರಿಕಾಭವನದಲ್ಲಿ ಭಾನುವಾರ ಬೆಳಿಗ್ಗೆ 10:30ಕ್ಕೆಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರು ಹಾಗೂ