ಬಳ್ಳಾರಿ ರೈಲ್ವೇ ನಿಲ್ದಾಣದ ಹೊಸಪೇಟೆ ಮತ್ತು ವ್ಯಾಸನಕೇರಿ ರೈಲು ನಿಲ್ದಾಣಗಳ ಮಧ್ಯದ ರೈಲ್ವೇ ಕಿ.ಮೀ ನಂ.10/400 ರ ರೈಲು ಹಳಿಯಲ್ಲಿ ಚಲಿಸುವ ರೈಲು ಗಾಡಿ ಸಂ.07396 ಗೆ ಸುಮಾರು 55 ವರ್ಷದ ಅನಾಮಧೇಯ ವ್ಯಕ್ತಿಯು ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಅಡ್ಡಲಾಗಿ ಬಂದು ಮೃತಪಟ್ಟಿದ್ದು, ಮೃತನ ವಾರಸುದಾರರ ಬಗ್ಗೆ ಮಾಹಿತಿ ಇರುವುದಿಲ್ಲ. ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಬಳ್ಳಾರಿ ರೈಲ್ವೆ ಇಲಾಖೆ ಸೋಮವಾರ ಸಂಜೆ 4ಗಂಟೆಗೆ ಪ್ರಕಟಣೆ ತಿಳಿಸಿದೆ. ಚಹರೆ: ಸುಮಾರು ಎತ್ತರ 5.6 ಅಡಿ, ಸದೃಢ ದೇಹ, ಸಾಧಾರಣ ಕಪ್ಪು ಮೈ ಬಣ್ಣ, ದುಂಡು ಮುಖ, ಅಗಲವಾದ ಕಿವಿ, ದಪ್ಪ ಮೂಗು, ತಲೆಯ ನೆತ್ತಿಯ ಮೇಲೆ ಕೂದಲು ಇರುವುದಿಲ್ಲ. ಕಪ್ಪು ಮಿಶ್ರಿತ ಬಿಳಿ ಕೂದಲು, ಸಣ್ಣ ಗಡ್ಡ ಮೀಸೆ ಬಿಟ್ಟಿರುತ್ತಾನೆ. ಮೃತನ ಮೈ ಮೇಲಿನ ಬಟ್ಟೆ