ರಾಮನಗರ - ಎಸ್ಐಟಿ ತನಿಖೆಯಿಂದ ಧರ್ಮಸ್ಥಳ ಭಕ್ತರು ನಿರಾಳರಾಗಿದ್ದಾರೆ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ಕಾರ ಎಸ್ಐಟಿ ತನಿಖೆಗೆ ಮುಂದಾದ ಕಾರಣ ಇವತ್ತು ಸತ್ಯ ಹೊರಗಡೆ ಬಂದಿದೆ, ಇದರಿಂದ ಧರ್ಮಾಧಿಕಾರಿಗಳು, ಅವರ ಕುಟುಂಬಕ್ಕೆ ಹಾಗೂ ಅಸಂಖ್ಯಾತ ಭಕ್ತರಿಗೆ ನಿರಾಳ ತಂದಿದೆ. ಮಾಸ್ಕ್ ಮ್ಯಾನ್ ತಪ್ಪೊಪ್ಪಿಗೆ ಅನಿವಾರ್ಯ. ಎಸ್ಐಟಿ ತನಿಖೆಯಲ್ಲಿ ಎಲ್ಲವೂ ಬಯಲಾಗುತ್ತೆ. ಷಡ್ಯಂತ್ರ ಮಾಡಿದವರು ಮಾಡಿಸಿದವರು ಒಳಗಡೆ ಹೋಗ್ತಾರೆ ಶಾಸಕ ಬಾಲಕೃಷ್ಣ ಭವಿಷ್ಯ ನುಡಿದರು. ಬಿಜೆಪಿ ಯವರ ಆರೋಪದಲ್ಲಿ ಯಾವುದೇ ಸತ್ಯವಿಲ್ಲ. ಹಿಂದೆ ಅವರದ್ದೇ ಸರ್ಕಾರ ಇದ್ದಾಗ ತನಿಖೆ ಮಾಡಿ, ಧರ್ಮಸ್ಥಳದ