ಹಾಸನ: ಮಲೆನಾಡು ಭಾಗದಲ್ಲಿ ಕಾಡಾನೆಗಳ ಜೊತೆ ಕಾಡುಕೋಣಗಳ ಕಾಟವು ಹೆಚ್ಚಾಗಿದ್ದು, ಸಕಲೇಶಪುರ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಕಾಫಿ ತೋಟಕ್ಕೆ ನುಗ್ಗಿ ಕಾಫಿ ಗಿಡಗಳನ್ನು ಹಾಳು ಮಾಡಿವೆ.ಗ್ರಾಮದ ಶ್ರೀಕಾಂತ್ ಎಂಬುವವರಿಗೆ ಸೇರಿದ ತೋಟಕ್ಕೆ ಬಂದಿರುವ ಕಾಡುಕೋಣಗಳು ಕೊಂಬಿನಿಂದ ತಿವಿದು ಹಾಳು ಮಾಡಿವೆ, ಇದರಿಂದ ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಬೆಳೆದಿರುವ ಕಾಫಿ ಗಿಡಗಳು ನೆಲಕಚ್ಚಿದ್ದು, ಕಾರ್ಮಿಕರು ಕೂಡ ಕೂಲಿ ಕೆಲಸಕ್ಕೆ ಬರಲು ಭಯ ಪಡುವಂತಾಗಿದೆ. ಇನ್ನು ಅರಣ್ಯ ಇಲಾಖೆ ಈ ಬಗ್ಗೆ ಮೌನಕ್ಕೆ ಶರಣಾಗಿದ್ದು ಕಾಡು ಕೋಣಗಳ ಉಪಟಳ ಬೆಳಗಾರರಿಗೆ ತಲೆನೋವಾಗಿ ಪರಿಣಮಿಸಿದೆ.