ಮಾಜಿ ಸಚಿವ ಸಾ ರಾ ಮಹೇಶ್ 500ಕ್ಕೂ ಅಧಿಕ ಕಾರ್ಯಕರ್ತರ ಜೊತೆಗೆ ಧರ್ಮಸ್ಥಳಕ್ಕೆ ಪಯಣ ಬೆಳೆಸಿದರು. ಧರ್ಮಸ್ಥಳ ವಿರುದ್ಧದ ಅಪಪ್ರಚಾರ ಖಂಡಿಸಿ ಯಾತ್ರೆ ಕೈಗೊಂಡಿರುವ ಸಾರಾ ಮಹೇಶ್ ಕೊಡಗಿಗೆ ಆಗಮಿಸಿದ ವೇಳೆ ಜೆಡಿಎಸ್ ಮುಖಂಡರು ಸ್ವಾಗತಿಸಿ ಬೀಳ್ಕೊಟ್ಟರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರೀಯೆ ನೀಡಿದ ಸಾ ರಾ ಮಹೇಶ್, ಧರ್ಮಸ್ಥಳ ಪುಣ್ಯ ಸ್ಥಳ. ಈ ದೇವಾಲಯದ ಬಗ್ಗೆ ಯಾರೇ ಷಡ್ಯಂತರ ನಡೆಸಿದರು ಅದು ನಡೆಯುವುದಿಲ್ಲ, ಚಿನ್ನಯ್ಯನ ಹಿಂದೆ ಯಾರು ಯಾರು ಇದ್ದಾರೆ ಎಂದು ತನಿಖೆ ಮುಂದುವರಿಯಬೇಕು. ನಾನು ಈ ಧರ್ಮಸ್ಥಳದ ಭಕ್ತ ಹಾಗೂ ಒಬ್ಬ ಜನಪ್ರತಿನಿದಿಯಾಗಿ ಈ ಪುಣ್ಯ ಕ್ಷೇತ್ರಕ್ಕೆ ಹೋಗುತ್ತಿದ್ದೇನೆ ಅಂತ ಹೇಳಿದ್ರು. BYTE: ಸಾ ರಾ ಮಹೇಶ್, ಮಾಜಿ ಸಚಿವ