ಗುರುವಾರ ಸಂಜೆ 5 ಗಂಟೆಯಲ್ಲಿ ಕೋಲಾರ ಜಿಲ್ಲಾ ಹಾಲು ಒಕ್ಕೂಟದಿಂದ ನಿರ್ಮಾಣ ಹಂತದಲ್ಲಿರುವ ಎಂ. ವಿ. ಕೆ ಗೋಲ್ಡನ್ ಡೇರಿ ಕಾಮಗಾರಿಯನ್ನು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂಎಲ್ ಸಿ ಅನೀಲ್ ಕುಮಾರ್ ಪರಿವೀಕ್ಷಿಸಿದರು. ಈ ಸಂದರ್ಭದಲ್ಲಿ, ಕೋಲಾರ-ಚಿಕ್ಕಬಳ್ಳಾಪುರ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಮ್. ಎಲ್. ಅನಿಲ್ ಕುಮಾರ್ ಅವರು ಕೋಮುಲ್ ಆಡಳಿತ ಮಂಡಳಿ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಹಾಜರಿದ್ದರು...