ಬೈಕ್‌ಗೆ ಕಾರು ಡಿಕ್ಕಿಯಾದ ಪರಿಣಾಮ ಫ್ಲೈಓವರ್ ಮೇಲಿಂದ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಆಗಸ್ಟ್ 24ರಂದು ಬೆಳಗ್ಗಿನ ಜಾವ 1 ಗಂಟೆ ಸುಮಾರಿಗೆ ಏರ್‌ಪೋರ್ಟ್ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಬಾಣಸವಾಡಿಯ ನಿವಾಸಿಯಾಗಿದ್ದ 31 ವರ್ಷದ ನೇತ್ರಾವತಿ ಎಂಬಾಕೆ ಸಾವನ್ನಪ್ಪಿದ್ದಾರೆ.ಒನ್‌ವೇನಲ್ಲಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಎಡ ಭಾಗದಲ್ಲಿ ನೇತ್ರಾವತಿಯವರ ಪತಿ ಬಿದ್ದಿದ್ದು ಪ್ರಾಣಾಪಾಯದಿಂದ ಪಾರಾರಗಿದ್ದಾರೆ. ಆದರೆ ಫ್ಲೈ ಓವರ್ ಮೇಲಿಂದ ಬಿದ್ದಿದ್ದ ನೇತ್ರಾವತಿ ತಲೆಗೆ ತೀವ್ರವಾದ ಗಾಯಗೊಂಡು ಸಾವನ್ನಪ್ಪಿದ್ದಾರೆ.