ಪಟ್ಟಣದ ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ಯಲ್ಲಾಪುರ: ಕಾಳಮ್ಮನಗರ, ನೂತನ ನಗರ, ತಿಲಕ ಚೌಕ, ಕಿರವತ್ತಿ, ಹೊಸಳ್ಳಿ ಸೇರಿದಂತೆ ವಿವಿಧೆಡೆ ತಪಾಸಣೆ ನಡೆದಿದೆ. ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾದ ಗಣೇಶ ಮಂಟಪಕ್ಕೆ ಬಾಂಬ್ ಬಾಂಬ್ ನಿಷ್ಕ್ರಿಯ ದಳಹಾಗೂ ಶ್ವಾನದಳ ಆಗಮಿಸಿತಪಾಸಣೆ ನಡೆಸಿದ್ದಾರೆ.ಗಣೇಶ ಉತ್ಸವದಲ್ಲಿ ಯಾವದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆಯಾಗಿ ಪೊಲೀಸ್ ಇಲಾಖೆ ಶಿರಸಿ ವಿಭಾಗಕ್ಕೆ ಬಾಂಬ್ ನಿಷ್ಕ್ರಿಯ ದಳವನ್ನು ನಿಯೋಜಿಸಿದೆ.ಯಲ್ಲಾಪುರದಲ್ಲೂ ಭದ್ರತಾ ವ್ಯವಸ್ಥೆ ಪರಿಶೀಲನೆಯನ್ನು ಮಾಡಿದರು.