ಸಾಗರ ತಾಲೂಕಿನ ಆನಂದಪುರದಲ್ಲಿ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಎಂದು ಸಂಚಾರಿ ನಿಯಮ ಕುರಿತು ಪೊಲೀಸರು ಬೈಕ್ ರ್ಯಾಲಿಯನ್ನ ಬುಧವಾರ ಸಂಜೆ 6 ಗಂಟೆಗೆ ನಡೆಸಿದರು. ಎಎಸ್ಪಿ ಬೆನಕ ಪ್ರಸಾದ್ ಬೈಕ್ ರ್ಯಾಲಿಗೆ ಚಾಲನ ನೀಡಿ ಮಾತನಾಡಿದ ಅವರು, ದ್ವಿಚಕ್ರವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದರಿಂದ ಜೀವ ಉಳಿಸಬಹುದು ಹಾಗಾಗಿ ಪ್ರತಿಯೊಬ್ಬರು ಹೆಲ್ಮೆಟ್ ಧರಿಸಿ ಬೈಕ್ ಓಡಿಸಬೇಕು ಎಂದು ಸಾರ್ವಜನಿಕ ರಿಗೆ ಸಲಹೆ ನೀಡಿದರು.