ಹುಬ್ಬಳ್ಳಿ: ನಗರದ ಅಕ್ಕಿಹೊಂಡದಲ್ಲಿ ಗಣೇಶ್ ಮೂರ್ತಿ ಖರೀದಿಸಿ, ಹರಿದ ಬಟ್ಟೆಯಲ್ಲಿದ್ದರೂ ತಲೆ ಮೇಲೆ ಹೊತ್ತುಕೊಂಡು ಹೋಗುತ್ತಿರುವ ೭೦ ವರ್ಷದ ವೃದ್ಧೆ ಗಿರಿಜಮ್ಮ ಕಂಬಳಿ ಅವರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದ ನಿವಾಸಿಯಾಗಿರುವ ಗಿರಿಜಮ್ಮ ತಮ್ಮ ಮುರುಕು ಮನೆಯಲ್ಲಿ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.