ಹೊಸ ಬೈಲಾ ಪ್ರಕಾರ ಮುಂದಿನ ಸಮಿತಿ ನಡೆದುಕೊಳ್ಳಬೇಕು ಎಂದು ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯ ನ್ಯಾಯವಾದಿ ಕೆ.ವಿ.ಪ್ರವೀಣ್ ತಿಳಿಸಿದರು. ಸಾಗರ ನಗರದಲ್ಲಿ ಬುಧವಾರ ಸಂಜೆ 6 ಗಂಟೆಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಹೊಸ ಬೈಲಾ ಪ್ರಕಾರ ಮುಂದಿನ ಸಮಿತಿ ನಡೆದುಕೊಳ್ಳಬೇಕು. ಡಿ.ಆರ್. ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಸಮಿತಿಗೆ ಯಾರೇ ಬಂದರೂ ಚುನಾವಣೆ ಗೆದ್ದು ಬರಬೇಕು. ಸಾರ್ವಜನಿಕವಾಗಿ ಲೆಕ್ಕಪತ್ರ ಕೊಡುವುದು ಕಡ್ಡಾಯ. ಒಂದೊಮ್ಮೆ ಲೆಕ್ಕಪತ್ರ ಹೆಚ್ಚು ಕಡಿಮೆಯಾದರೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ಅವಕಾಶ ಇರುತ್ತದೆ.