ಹುಬ್ಬಳ್ಳಿ: ಐತಿಹಾಸಿಕ ಹುಬ್ಬಳ್ಳಿಯ ರಾಣಿ ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಶ್ರೀಕೃಷ್ಣನ ಅವತಾರದ ಶ್ರೀ ಗಣೇಶನ ವಿಸರ್ಜನೆ ಸಂಜೆಯೊಳಗಾಗಿ ಜರುಗಲಿದ್ದು, ಭಕ್ತಾದಿಗಳು ಶ್ರೀ ಗಣೇಶ ದರ್ಶನವನ್ನು ಪಡೆದುಕೊಳ್ಳಲು ಸಾಗರೋಪಾದಿಯಲ್ಲಿ ಆಗಮಿಸಿದ್ದು, ಕಂಡು ಬಂದಿತು. ಬುಧವಾರದಂದು ನಗರದ ಮೂರುಸಾವಿರಮಠದಿಂದ ಅದ್ಧೂರಿ ಮೆರವಣಿಗೆಯ ಮೂಲಕ ಪ್ರತಿಷ್ಠಾಪನೆಗೊಂಡಿದ್ದ ಗಣೇಶ ಇಂದು ವಿದಾಯ ಹೇಳಲಿದ್ದಾನೆ. ರಾಣಿಚೆನ್ನಮ್ಮ ಮೈದಾನದಿಂದ ಗ್ಲಾಸ್ ಹೌಸ್ ವರೆಗೂ ಶ್ರೀ ಗಣೇಶನ ಮೆರವಣಿಗೆ ಇದ್ದು, ಡೊಳ್ಳು ಕುಣಿತು, ಜಾಂಜ್ ಮೇಳ, ವಿವಿಧ ವಾದ್ಯ ಮೇಳದೊಂದಿಗೆ ಜನರು ಕುಣಿದು ಕುಪ್ಪಳಿಸಿದರು.