ಸಿನಿಮೀಯ ರೀತಿಯಲ್ಲಿ ಕಾರುಚಾಲಕರೊಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಕಿ ಸೈಬರ್ ಕಳ್ಳರು 39 ಸಾವುರ ಹಣ ಎಗರಿಸಿರುವ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದ್ದು, ಮಂಗಳವಾರ ಬೆಳಕಿಗೆ ಬಂದಿದೆ. ತಾಲೂಕಿನ ವಿಶ್ವೇಶ್ವರ ಪುರ ಗ್ರಾಮದ ಕಾರು ಚಾಲಕ ನರಂಸಿಂಹಮೂರ್ತಿ ಎಂಬುವರು ನಗರದ ಉಜ್ಜೀವನ್ ಪೈನಾನ್ಸ್ ಬ್ಯಾಂಕಿನಲ್ಲಿ ಖಾತೆ ಹೊಂದಿದೆ ಕಳೆದ ಒಂದು ವಾರದಿಂದ ಕರೆ ಮಾಡಿ ನಿಮಗೆ ಲಕ್ಷರೂ ಬರುತ್ತದೆ. ನಿಮ್ಮಮೊಬೈಲ್ ಗೆ ಒಟಿಪಿ ಬರುತ್ತದೆ ಹೇಳಿ ಎಂದರೂ ಅವರ ಕರೆಗೆ ಕಿವಿಗೊಡದೆ ಉತ್ತರ ನೀಡದೆ ಸುಮ್ಮನಿದ್ದರೂ ಆದರೂ ಸಹ ಸೋಮವಾರ ಅವರ ಖಾತೆಯಿಂದ ಮೂರು ಬಾರಿ ಹಣ ಎಗರಿಸಿರುವ ಸಂದೇಶ ಬಂದ ತಕ್ಷಣ ಖಾತೆಯಲ್ಲಿದ್ದ ಹಣ ಸ್ನೇಹಿತರ ಖಾತೆಗೆ ವರ್ಗಾವಣೆ ಮಾಡಿದ್ದಾರೆ.