Lನಾಪೋಕ್ಲು : ಕಾರುಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಪ್ರಯಾಣಿಕರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ನಾಪೋಕ್ಲು ಮೂರ್ನಾಡು ಮುಖ್ಯರಸ್ತೆಯ ಹೊದವಾಡ ಗ್ರಾಮದ ಬೊಳಿಬಾಣೆ ಎಂಬಲ್ಲಿ ನಡೆದಿದೆ. ಮರಗೋಡು ಅಬ್ಯತ್ ಮಂಗಲದ ನಿವಾಸಿಗಳು ಪಾಲೂರು ದೇವಾಲಯದಲ್ಲಿ ಕಾರ್ಯಕ್ರಮ ಮುಗಿಸಿ ಮೂರ್ನಾಡು ಮಾರ್ಗವಾಗಿ ಅಬ್ಯತ್ ಮಂಗಲಕಡೆಗೆ ಮಾರುತಿ ಸ್ವಿಫ್ಟ್ (KA12Z6919) ಕಾರಿನಲ್ಲಿ ತೆರಳುತ್ತಿರುವ ಸಂದರ್ಭ ಮೂರ್ನಾಡು ಭಾಗದಿಂದ ನಾಪೊಕ್ಲು ಕಡೆಗೆ ಬರುತ್ತಿದ್ದ ಹುಂಡೈ ಐಟೆನ್ (KA12Z6078)ಕಾರಿನ ನಡುವೆ ನಾಪೋಕ್ಲು ಮೂರ್ನಾಡು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಬೊಳಿಬಾಣೆ ಬಳಿಯ ರಸ್ತೆ ತಿರುವಿನಲ್ಲಿ ಮುಖಮುಖಿ ಅಪಘಾತ ಸಂಭವಿಸಿದೆ. ಅಪಘಾತದ ರಬ್ಬಸಕ್ಕೆ ಎರಡು ಕಾರುಗಳು ಜಖಂಗೊಂಡಿದೆ. ಅಪಘಾತದಿಂದ ಹುಂ