ರೈತನೋರ್ವ ಅತಿವೃಷ್ಠಿಯಿಂದ ಹಾನಿಯಾದ ತೋಗರಿ ಗಿಡದ ಸಮೇತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ಅಳಲು ತೋಡಿಕೊಳ್ಳಲು ಬಂದಾಗ, ನಿಂದು ನಾಲ್ಕು ಎಕ್ಕರೆ ಹಾನಿಯಾಗಿದೆ ನಂದು ನಾಲವತ್ತು ಎಕ್ಕರೆ ಹಾನಿಯಾಗಿದೆ. ಆರು ಹಡಿದವಳ ಮುಂದೆ ಮೂರು ಹಡಿದವಳು ಕೇಳತ್ತಿದ್ರು ಅಂತ ಹಾಗೆ ಮಾಡಬೇಡ ಎಂದು ಹೇಳುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಉಡಾಫೆಯಾಗಿ ಮಾತನಾಡಿರುವದು ಸರಿಯಲ್ಲ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ವಾಗ್ದಾಳಿ ನಡೆಸಿದ್ದಾರೆ. ಭಾನುವಾರ 5 ಗಂಟೆಗೆ ಮಾತನಾಡಿ ವಿಡಿಯೊ ಹಂಚಿಕೊಂಡಿದ್ದಾರೆ.