ಸಪ್ಟೆಂಬರ್ 3 ರಾತ್ರಿ 8 ಗಂಟೆಯ ಸುಮಾರಿಗೆ ಯಲಚೆನಹಳ್ಳಿ ಹಳ್ಳಿ ಭಾಗದಲ್ಲಿ ವರುಣಾರ್ಭಟಿಸಿದ ಕಾರಣ ಇಡೀ ಏರಿಯಾ ಜಲಾವೃತವಾಗಿತ್ತು. ಇತ್ತೀಚಿನ ದಿನದಲ್ಲಿ ಚಿಕ್ಕ ಮಳೆಗೂ ಕೂಡ ರಸ್ತೆ ಎಲ್ಲಾ ಹೊಳೆಯಂತಾಗುತ್ತೆ ಬೈಕ್ ಗಳು ಮುಳುಗುತ್ತವೆ. ರಾಜ ಕಾಲವೇ ನೀರು ಹರಿದು ಬಂದು ಹಾವು ಕ್ರಿಮಿ ಕೀಟಗಳು ಹೆಚ್ಚುತ್ತಿವೆ. ಚಿಕ್ಕ ಚಿಕ್ಕ ಮಕ್ಕಳನ್ನು ಆಸ್ಪತ್ರೆಗೆ ಕರ್ಕೊಂಡು ಹೋಗುವುದು ಮನೆಗೆ ಕರೆದುಕೊಂಡು ಬರೋದೇ ಜನರ ನಿತ್ಯ ಕೆಲಸ ಆಗಿಬಿಟ್ಟಿದೆ. ಬನಶಂಕರಿ ಭಾಗದಿಂದೆಲ್ಲ ರಾಜ ಕಾಲುವೆಗೆ ನೀರು ಹೋಗ್ತಾ ಇರೋದ್ರಿಂದ ಸೂಕ್ತವಾಗಿ ನೀರು ಹರಿದುಹೋಗುವುದಕ್ಕೆ ವ್ಯವಸ್ಥೆ ಇಲ್ಲ ಇದೇ ಕಾರಣಕ್ಕೆ ನೀರು ಹರಿದು ಮನೆಗಳಿಗೆ ನುಗ್ಗುತ್ತಿದೆ. ಆದಷ್ಟು ಬೇಗ ಇದನ್ನು ಸರಿ ಮಾಡಿ ಕೊಡುವಂತೆ ಗ್ರೇಟರ್ ಬೆಂಗಳೂರು ಅಥಾರಿಟಿಗೆ ಜನ ಮನವಿ ಮಾಡಿದ್ದಾರ