ನಾಪೋಕ್ಲು :ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಏರಿಕೆಯಾಗಿದ್ದರೂ ಕೊಡಗಿನ ಕಾಫಿ ಬೆಳೆಗಾರರಿಗೆ ಸೂಕ್ತ ಬೆಲೆ ಸಿಗದೆ ಅನ್ಯಾಯವಾಗುತ್ತಿದ್ದು ಅಂತರಾಷ್ಟ್ರೀಯ ಬೆಲೆಗೆ ಅನುಗುಣವಾಗಿ ಸೂಕ್ತ ಬೆಲೆಯನ್ನು ನೀಡದ ಕಾಫಿ ಖರೀದಿದಾರರ ವಿರುದ್ಧ ಮುಂಬರುವ ದಿನಗಳಲ್ಲಿ ವಿರಾಜಪೇಟೆ ಶ್ರೀಮಂಗಲದ ಕೊಡಗು ಕಾಫಿ ಬೆಳೆಗಾರರು ಹಮ್ಮಿಕೊಂಡಿರುವ ಹೋರಾಟಕ್ಕೆ ನಾಪೋಕ್ಲು ನಾಲ್ಕುನಾಡು ಬೆಳೆಗಾರರ ಒಕ್ಕೂಟ ಹಾಗೂ ಸೇವ್ ಕೊಡಗು ವೇದಿಕೆಯ ಕಾರ್ಯಕರ್ತರು ಸಂಪೂರ್ಣ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ. ನಾಪೋಕ್ಲುವಿನಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ನಾಲ್ಕು ನಾಡು ಕಾಫಿ ಬೆಳೆಗಾರರ ಒ ಒಕ್ಕೂಟದ ಸದಸ್ಯರಾದ ಕುಲ್ಲೇಟಿರ ಅರುಣ್ ಬೇಬ ಮಾತನಾಡಿ ದಿನ ಕಳೆದಂತೆ ಏರಿಕೆ ಇಳಿಕೆ ಆಗುತ್ತಿರುವ ಕಾಫಿ ಮೇಲಿನ ಬೆಲೆಯೂ ರೈತರಿಗೆ ಸಂಕಷ್ಟ ತಂ