ಹಾಸನ: ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮೊಸಳೆ ಹೊಸಳ್ಳಿ ಬಳಿ ನೆನ್ನೆ ನಡೆದ ಗಣೇಶ ಉತ್ಸವದ ಮೆರವಣಿಗೆ ಮೇಲೆ ಟ್ರಕ್ ಹರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಿಮ್ಸ್ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳು ಆರೋಗ್ಯ ವಿಚಾರಿಸಿದರು.ಮೊದಲು ಪ್ರವಾಸಿ ಮಂದಿರಕ್ಕೆ ಆಗಮಿಸಿ, ಅಲ್ಲಿಂದ ಹಿಮ್ಸ್ ಗೆ ತೆರಳಿ ಮೊಸಳೆ ಹೊಸಳ್ಳಿ ದುರಂತದಲ್ಲಿ ಬದುಕುಳಿದಿರುವ ಗಾಯಾಳುಗಳು ಮತ್ತವರ ಕಡೆಯವರನ್ನು ಮಾತನಾಡಿಸಿ ಧೈರ್ಯ ಹೇಳಿದರು. ದುರಂತಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದ ದೇವೇಗೌಡರು, ಇದು ನಡೆಯಬಾರದಿತ್ತು. ಮೃತಪಟ್ಟವರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳೇ ಹೆಚ್ಚಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿ ಮಮ್ಮಲ ಮರುಗಿದರು.