ಸಕಲೇಶಪುರ ತಾಲೂಕಿನ ಬಾಳಪೇಟೆ ಹೋಬಳಿಯ ಜಮ್ಮನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಭೂಮಿಯನ್ನು ಕಬಳಿಸಿ ತಂತಿ ಬೇಲಿ ಹಾಕಿ ಕಾಫಿ, ಸಿಲ್ವರ್ ಗಿಡಗಳನ್ನು ರಾಜಾರೋಷವಾಗಿ ಬೆಳೆದು ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ ಎಂದು ದೂರಿದರು. ಜಮ್ಮನಹಳ್ಳಿಯ ಗಾಳಿಗುಡ್ಡ ಗ್ರಾಮದ ಸರ್ವೆ ನಂ ೩೩ ರಲ್ಲಿ ೬೪ ಎಕರೆ ಗೋಮಾಳ ಜಾಗದಲ್ಲಿ ೪ ಎಕರೆ ೩೦ ಗುಂಟೆ ಜಾಗವನ್ನು ೨೦೧೯ ರಿಂದಲೂ ಅಕ್ರಮ ಬೇಲಿಹಾಕಿಕೊಂಡು ಕಾಫಿ, ಸಿಲ್ವರ್ ಮರಗಳನ್ನು ನೆಟ್ಟು ನಮ್ಮದೆ ಭೂಮಿ ಎಂದು ಸುಳ್ಳು ದಾಖೆಲೆಗಳನ್ನು ಇಟ್ಟುಕೊಂಡು ದೌರ್ಜನ್ಯ ಎಸಗುತ್ತಿದ್ದಾರೆ. ಶಣ್ಮುಗಯ್ಯ (ರಾಜು ರೈಟರ್) ಎಂಬ ಬಾಳುಪೇಟೆಯ ವ್ಯಕ್ತಿ ಭೂ ಕಬಳಿಕೆ ಮಾಡಿರುವ ವ್ಯಕ್ತಿಯಾಗಿದ್ದಾರೆ. ಈಗಾಗಲೆ ತಹಸಿಲ್ದಾರರು ಮತ್ತು ಗ್ರಾಮ ಲೆಕ್ಕಿಗ ಪಂಚಾಯ್ತಿ ಆಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು