ಹುಬ್ಬಳ್ಳಿ : ದೇಶಪಾಂಡೆ ನಗರದ ಕಾಮಾಕ್ಷಿ ಅಪಾರ್ಟ್ಮೆಂಟ್ ನಲ್ಲಿರುವ ಹವಾಲಾ ಕಿಂಗ್ ಪಿನ್ ಸಮುಂದರ್ ಸಿಂಗ್ ಮನೆ ಮೇಲೆ ಇಡಿ ದಾಳಿ ಮಾಡಿದೆ. ಇಂದು ಮುಂಜಾನೆ ಏಕಾಏಕಿ 15 ಜನ ಅಧಿಕಾರಿಗಳ ತಂಡದಿಂದ ಏಕಕಾಲದಲ್ಲಿ ಅಪಾರ್ಟ್ಮೆಂಟ್ 401, 402, ಮನೆಯ ಮೇಲೆ ದಾಳಿ ಮಾಡಿದ್ದಾರೆ. ಐದನೇ ಮಹಡಿಯಲ್ಲಿರು ಸಮುಂದರ್ ಸಿಂಗ್ ಹಾಗು ಆತನ ಸಹೋದರ ಮನೆ ದಾಳಿ ಮಾಡಿದ್ದಾರೆ. ಗೋವಾದಲ್ಲಿ ಮೆಜೆಸ್ಟಿಕ್ ಫ್ರೈಡ್ ಕ್ಯಾಸಿನೊ ಸಮುಂದರ್ ಸಿಂಗ್ ನಡೆಸುತ್ತಿದ್ದನು ಎನ್ನಲಾಗಿದ್ದು ಪರಿಶೀಲನೆ ನಂತರ ಪೂರ್ವಪರ ತಿಳಿದು ಬರಬೇಕಾಗಿದೆ.