ಸೆ. 17 ರಂದು ಕ್ರಾಂತಿ ವೀರ ಸಂಗೋಳಿ ರಾಯಣ್ಣಾ ಮೂರ್ತಿ ಅನಾವರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಲಬುರಗಿ ನಗರಕ್ಕೆ ಆಗಮಿಸಲಿದ್ದಾರೆಂದು ಕರ್ನಾಟಕ ಪ್ರದೇಶ ಕುರುಬ ಸಂಘದ ಅಧ್ಯಕ್ಷ ಗುರುನಾಥ ಪುಜಾರಿ ತಿಳಿಸಿದ್ದಾರೆ. ಶೆನಿವಾರ 3 ಗಂಟೆಗೆ ಮಾತನಾಡಿದ ಅವರು, ಬಹುದಿನಗಳಿಂದ ಅನಾವರಣ ಕಾರ್ಯಕ್ರಮ ನೆನೆಗುದಿಗೆ ಬಿದ್ದಿತ್ತು. ಇದೀಗ ಸೆ. 17 ರಂದು ಮೂರ್ತಿ ಅನಾವರಣ ಸಿಎಂ ನೇರವೇರಿಸಲಿದ್ದಾರೆ. ಅಲ್ಲದೆ ಕುರುಬ ಸಮಾಜದ ಪ್ರಗತಿಗೆ ಶ್ರಮಿಸಿದ ಅನೇಕನ್ನು ಸನ್ಮಾನಿಸಲು ಅಂದು ಶರಣಬಸವೇಶ್ವರ ಜಾತ್ರಾ ಮೈಧಾನದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು..