ಬೇಲೂರು:ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ ಹಾಗೂ ಜನಪರ ಹೋರಾಟಗಾರರಾಗಿದ್ದ ನಾಸು ಹರ್ಡಿಕರ್ ಅವರ 50ನೇ ವರ್ಷದ ಪುಣ್ಯಸ್ಮರಣೆಯನ್ನು ಬೇಲೂರು ಪಟ್ಟಣದ ಹರ್ಡಿಕರ್ ವೃತ್ತದಲ್ಲಿ ಹರ್ಡಿಕರ್ ಪುತ್ಥಳಿಗೆ ಪೂಜೆ ಸಲ್ಲಿಸಿ ಗೌರವದಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಭಾರತ್ ಸೇವಾದಳದ ತಾಲೂಕು ಅದ್ಯಕ್ಷ ಯುವರಾಜ್, ನಾಸು ಹರ್ಡಿಕರ್ ಅವರು ತಮ್ಮ ಜೀವನವನ್ನು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅರ್ಪಿಸಿ, ಸಮಾಜದ ದುರ್ಬಲ ವರ್ಗಗಳ ಹಕ್ಕು-ಹಿತಗಳನ್ನು ಕಾಪಾಡಲು ಶ್ರಮಿಸಿದರು. ಅವರ ತ್ಯಾಗ-ಸಾಧನೆಗಳು ಯುವ ಪೀಳಿಗೆಗೆ ಪ್ರೇರಣೆ" ಎಂದು ಪ್ರಶಂಸಿಸಿದರು.