ನಗರದ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅಂದಾಜು 35-40 ವರ್ಷದ ಅನಾಮಧೇಯ ವ್ಯಕ್ತಿಯನ್ನು ಅಪರಿಚಿತ ವ್ಯಕ್ತಿಗಳಿಂದ ಯಾವುದೋ ಉದ್ದೇಶಕ್ಕಾಗಿ ಕಲ್ಲುಗಳಿಂದ ಹೊಡೆದು ಸೆ.04 ರಂದು ಕೊಲೆ ಮಾಡಿದ್ದು, ಈ ಕುರಿತು ಪ್ರಕರಣ ದಾಖಲಾಗಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.ಮೃತನ ಚಹರೆ:ಎತ್ತರ ಅಂದಾಜು 5.7 ಅಡಿ, ದುಂಡು ಮುಖ, ಗೋಧಿ ಮೈ ಬಣ್ಣ, ತಲೆಯಲ್ಲಿ ಅಂದಾಜು 3-1/2 ಇಂಚು ಉದ್ದದ ಬಿಳಿ ಮಿಶ್ರಿತ ಕಪ್ಪು ಬಣ್ಣದ ಕೂದಲು, ಅರ್ಧ ಇಂಚು ಉದ್ದದ ಕಪ್ಪು ಮೀಸೆ ಮತ್ತು 1 ಇಂಚು ಉದ್ದದ ಕಪ್ಪು ಮಿಶ್ರಿತ ಬಿಳಿ ಗಡ್ಡ ಇರುತ್ತದೆ. ಮೃತನ ಬಲಗಡೆ ಕಣ್ಣಿನ ಮೇಲೆ ಮತ್ತು ಹಣೆಯ ಎಡಭಾಗದ ಮೇಲೆ ಭಾರಿಗಾಯ ಇರುತ್ತದೆ.