ಇಂದಿಗೂ ಅದೆಷ್ಟೋ ಹಳ್ಳಿಗಳಲ್ಲಿ ರಸ್ತೆ ವ್ಯವಸ್ಥೆಯಿಲ್ಲ, ಜನರು ಕಾಲುದಾರಿಯಲ್ಲಿ ಓಡಾಡುವ ಪರಿಸ್ಥಿತಿ ಇದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ದೊಡ್ಡಬಿದರೆ ಗ್ರಾಮದಲ್ಲಿ ರಸ್ತೆಯ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದು, ಕೆಸರುಗದ್ದೆಯಾದ ರಸ್ತೆಯಲ್ಲಿ ಗ್ರಾಮಸ್ಥರು ಓಡಾಡುವಂತಾಗಿದೆ. ದೊಡ್ಡಬಿದರೆ ಗ್ರಾಮದಲ್ಲಿ ಹಟ್ಟಿ ಮಾರಮ್ಮ ದೇವಾಲಯದ ಎದುರಿನ ರಸ್ತೆಯ ಕಾಮಗಾರಿ ಅರ್ಧದಲ್ಲೇ ನಿಂತು, ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ಅಧಿಕಾರಿಗಳು ಮೀನಾ ಮೇಷ ಮಾಡಿ ಪ್ರಾರಂಭಿಸಿದ ಕಾಮಗಾರಿಯಲ್ಲಿ ಮೊದಲು ರಸ್ತೆ ಕಿತ್ತು, ನಂತರ ಚರಂಡಿ ನಿರ್ಮಾಣ ಮಾಡಿದ್ರು. ಆದಾದ ಮೇಲೆ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ತಕ್ಷಣ ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಇದ್ದರೆ ಉಗ್ರ ಹೋರಾಟ ನಡೆಸು