ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ರತ್ನಾಪುರ ಹಟ್ಟಿ ಗ್ರಾಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎರಡು ನೂತನ ಕೊಠಡಿಗಳನ್ನು ಉದ್ಘಾಟನೆ ಮಾಡಿದ ಶಾಸಕರು ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಅಧ್ಯಕ್ಷರಾದ ಆರ್ ಬಸನಗೌಡ ತದನಂತರ ಮಾತನಾಡಿ ನಮ್ಮ ಸರ್ಕಾರದಿಂದ ಶಿಕ್ಷಣಕ್ಕಾಗಿ ಮೊದಲನೇ ಆದ್ಯತೆಯನ್ನು ನೀಡಲಾಗುತ್ತಿದೆ ಶಿಕ್ಷಣವಿದ್ದರೆ ಮಾತ್ರ ಎಲ್ಲವನ್ನು ಗೆಲ್ಲುವುದಕ್ಕೆ ಸಾಧ್ಯ ಎಂದು ಮಾತನಾಡಿದರು.