ಮುಂಜಾನೆಯಿAದ ಮಹಾಲಿಂಗಪುರದ ಪಟ್ಟಣದಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ಪಟ್ಟಣದ ಅಂಬೇಡ್ಕರ್ ಸರ್ಕಲ್ ಹತ್ತಿರ ಮನೆ ಗೋಡೆ ಕುಸಿದು ೧೧ ವರ್ಷದ ಬಾಲಕ ದರ್ಶನ್ ಲಾತೂರ ಮೃತಪಟ್ಟಿದ್ದಾನೆ. ಬಾಲಕನ ಕುಟುಂಬ ಪತ್ರಾಸ್ ಮನೆಯಲ್ಲಿ ವಾಸವಿದ್ದು, ಶನಿವಾರ ಬೆಳಗಿನ ಜಾವ ೫ ಗಂಟೆ ಸುಮಾರಿಗೆ ಇವರ ಬದಿಯ ಮನೆಯ ಗೋಡೆ ಕುಸಿದು ಪತ್ರಾಸ್ ಮೇಲೆ ಬಿದ್ದಿದೆ. ಪತ್ರಾಸ್ ಕೆಳಗೆ ಮಲಗಿದ್ದ ಬಾಲಕ ದರ್ಶನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬಾಲಕನ ತಾಯಿ ರೂಪಾ, ಸಹೋದರಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.