ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 1 ರಾತ್ರಿ 11:00 ಗಂಟೆ ಸುಮಾರಿಗೆ ಯುವಕನೋರ್ವ ನಿಗೆ ಕಾರಿನಲ್ಲಿ ಬಂದಂತಹ ಗಗನ್ ರೆಡ್ಡಿ ಅನ್ನುವಾತ ಹಿಗ್ಗ ಮುಗ್ಗ ಥಳಿಸುತ್ತಾನೆ. ಕಾರಿಗೆ ಅಡ್ಡ ಬಂದಿರುವ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕಿರಿಕ್ ಶುರುವಾಗಿ ರಕ್ತ ಬರುವವರೆಗೂ ಹೊಡೆಯುತ್ತಾನೆ. ಅಶ್ರುತ್ ಏನ್ನುವ 23 ವರ್ಷದ ಯುವಕನ ಹಲ್ಲು ಮುರಿದು ಆತನ ಮುಖಕ್ಕೆ ಹೊಡೆದು ಮೂಗಿಗೆ ಗಾಯ ಆಗಿ ಕಣ್ಣು ಬಳಿಯೂ ಕೂಡ ರಕ್ತ ಸೋರುತಿತ್ತು. ಇಷ್ಟೆಲ್ಲ ಘಟನೆಯನ್ನು ಯುವಕ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದರೆ ಮಾರತಹಳ್ಳಿ ಪೊಲೀಸರಿಗೆ ಹೋಗಿ ನನ್ನ ಹೆಸರು ಹೇಳು ಅಂತ ಆರೋಪಿ ಅವಾಜ್ ಹಾಕಿದ್ದಾನೆ. ಗಗನ್ ರೆಡ್ಡಿ ಎನ್ನುವ ಆರೋಪಿಯ ವಿಡಿಯೋ ಎಲ್ಲಾ ಕಡೆ ವೈರಲ್ ಆಗ್ತಿದೆ