ಇಲಕಲ್ಲ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗ್ರಾಮೀಣ ಕೂಟ ಕ್ರೆಡಿಟ್ ಅಕ್ಸಿಸ್ ಲಿಮಿಟೆಡ್ ಶಾಖೆಯ ವತಿಯಿಂದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಕಾರ್ಯಾಗಾರ ಅಗಸ್ಟ ೩೦ ಶನಿವಾರ ಮಧ್ಯಾಹ್ನ ೨ ಗಂಟೆಗೆ ನಡೆಯಿತು. ಕಾರ್ಯಕ್ರವನ್ನು ಇಲಕಲ್ಲ ಗ್ರಾಮೀಣ ಪೊಲೀಸ್ ಠಾಣೆಯ ಕ್ರೈಂ ಪಿಎಸ್‌ಐ ಎಸ್.ಆರ್ ನಾಯಕ ಉದ್ಘಾಟಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಕರೆ ಹೆಸರಿನಲ್ಲಿ ಬರುವ ಒಟಿಪಿ, ಕೆವೈಸಿ ಕೇಳುವ ಕರೆಗಳು ವಂಚಕರ ತಂತ್ರ. ಸಾರ್ವಜನಿಕರು ಇಂತಹ ಕರೆಗಳಿಗೆ ಸ್ಪಂದಿಸಬಾರದು. ಕಣ್ಣು ತಪ್ಪಿನಿಂದ ಮೋಸವಾದರೆ ಕೂಡಲೇ ೧೯೩೦ಗೆ ಕರೆಮಾಡಿ ಸೈಬರ್ ವಂಚಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ಸಾಲ ತೆಗೆದುಕೊಂಡಲ್ಲಿ ಮೊದಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಆದ್ಯತೆ ಕೊಡಬೇಕು" ಎಂದು ಸಲಹೆ ನೀಡಿದರು. ಅಧ್