ಮಾರುಕಟ್ಟೆಯಲ್ಲಿ ಈರುಳ್ಳಿಗೆ ಸರಿಯಾದ ಬೆಲೆಯಿಲ್ಲದಿರುವುದರಿಂದ ನನ್ನಿವಾಳ ಗ್ರಾಪಂ ರೈತರ ಜಮೀನುಗಳಲ್ಲಿ ಈರುಳ್ಳಿ ಕಟಾವು ಮಾಡದೆ ಒಣಗಲು ಬಿಟ್ಟಿರುವುದು ಗುರುವಾರ ಬೆಳಕಿಗೆ ಬಂದಿದೆ. ರೈತರು ಒಂದು ಕಡೆ ಕಟಾವು ಮಾಡಲು ಈರುಳ್ಳಿ ಬಂದರೂ ಕಟಾವು ಮಾಡದೆ ಹೊಲದಲ್ಲಿ ಬಿಟ್ಟಿರುವುದು ಕಂಡು ಬಂದರೆ, ಮತ್ತೊಂದು ಕಡೆ ಈರುಳ್ಳಿ ನೀರು ಹರಿಸದೆ ಒಣಗಲು ಬಿಟ್ಟಿದ್ದಾರೆ. ರೈತರು ಸಾಲು ಮಾಡಿ ಬೆಳೆದ ಈರುಳ್ಳಿ ಬೆಳೆಗೆ ಸರಿಯಾದ ಬೆಲೆ ಇಲ್ಲದಿರುವುದರಿಂದ ರೈತರು ಆತಂಕಗೊಂಡು ಈರುಳ್ಳಿ ನಾಶಪಡಿಸಲು ಮುಂದಾಗಿದ್ದಾರೆ.