ಕಲ್ಬುರ್ಗಿ ಜಿಲ್ಲೆಯಲ್ಲಿ ವರುಣ ಅಬ್ಬರಿಸಿದ್ದು ಜನತೆ ಕಂಗಲಾಗಿದ್ದಾರೆ. ಆಳಂದ ತಾಲೂಕಿನ ಪಡಸಾವಳಿ ಗ್ರಾಮದಿಂದ ನಿರಗುಡಿಗೆ ಹೋಗುವ ಮಾರ್ಗದಲ್ಲಿರುವ ಹಳ್ಳ ತುಂಬಿ ಸೇತುವೆ ರಸ್ತೆ ಸಂಪೂರ್ಣ ಜಲಾವೃತವಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಹೀಗಾಗಿ ಪಡಸಾವಳಿ ನಿರಗುಡಿ ಮಧ್ಯ ಸಂಚರಿಸುವ ಜನರಿಗೆ ಬಾರಿ ಅಡಚನ್ನು ಉಂಟಾಗಿದೆ. ಅಲ್ಲದೆ ಹಳ್ಳದ ಅಕ್ಕಪಕ್ಕದ ರೈತರ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದಲ್ಲಿ ಬೆಳೆ ಹಾಗೂ ಭೂಮಿ ನಾಶವಾಗಿದೆ ಎಂದು ಗುರುವಾರ 3 ಗಂಟೆಗೆ ಮಾಹಿತಿ ಲಭ್ಯವಾಗಿದೆ.