ಚಾಮುಂಡಿ ತಾಯಿ ಹಿಂದೂಗಳದ್ದು ಅಲ್ಲ ಎಂದ ಮೇಲೆ ಇನ್ಯಾರದ್ದು ಆಗುತ್ತೆ, ಡಿಕೆ ಶಿವಕುಮಾರ್ ಹೇಳಿಕೆ ಓಲೈಕೆಯ ಪರಮಾವಧಿ ಎಂದು ಬಿಜೆಪಿ ಎಂಎಲ್ಸಿ ಸಿಟಿ ರವಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಕಿಡಿ ಕಾರಿದ್ದಾರೆ. ಗುರುವಾರ ಮಧ್ಯಾಹ್ನ 2 ಸುಮಾರಿಗೆ ಮಾತನಾಡಿದ ಅವರು ಚಾಮುಂಡಿ ಬೆಟ್ಟವೇ ಹಿಂದುಗಳದ್ದಲ್ಲ ಎನ್ನುವ ಡಿಕೆಶಿ ಹೇಳಿಕೆಯೇ ಸರಿ ಇಲ್ಲ. ಅಜ್ಮೀರ್, ಮೆಕ್ಕಾ, ದರ್ಗಾ, ಮುಸಲ್ಮಾನರದ್ದು ಅಲ್ಲ ಅಂದ್ರೆ ಹೇಗೆ ಆಗುತ್ತೋ ಇದು ಹಾಗೆ..!. ಯಾಕೋ ಇತ್ತೀಚಿಗೆ ಅವರ ಓಲೈಕೆ ಕೆಲವರ ಪರ ಮಿತಿ ಮೀರುತಿದೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಸಿಟಿ ರವಿ ಕುಟುಕಿದ್ದಾರೆ.