ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಗಲಾಟೆ ಅನ್ಯ ಕೋಮಿನವರ ಅತಿರೇಕದ ವರ್ತನೆ ಎಂದು ಶಾಸಕ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ. ಸೆಪ್ಟೆಂಬರ್ 8ರಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, "ನಾವು ಇರಾನ್ ಅಥವಾ ಇರಾಕ್‌ನಲ್ಲಿಲ್ಲ, ಭಾರತದಲ್ಲಿ ಇದ್ದೇವೆ.ಈದ್ ಮಿಲಾದ್ ಮೆರವಣಿಗೆ ವೇಳೆ ಯಾರೂ ಗಲಾಟೆ ಮಾಡಿಲ್ಲ. ಈಗ ಗಣೇಶ ವಿಗ್ರಹದ ಮೇಲೆ ಕಲ್ಲು ತೂರಾಟ ಮಾಡಿ, ಮಾರಕಾಸ್ತ್ರ ಬೀಸಿರುವುದು ಅತಿರೇಕದ ವರ್ತನೆ. ಕಾಂಗ್ರೆಸ್‌ನ ಓಲೈಕೆ ರಾಜಕಾರಣಕ್ಕೆ ಯಾರೂ ಮಣಿಯುವುದಿಲ್ಲ' ಎಂದರು