ರೈತ ಸಂಘದ 2017 ರಿಂದ 2025 ರವರೆಗೆ ನಡೆಸಿದ ಹೋರಾಟದಿಂದ ನಗರದಲ್ಲಿ ಇಂದು ಸಾರಿಗೆ ಘಟಕ ಉದ್ಘಾಟನೆಯಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಹೇಳಿದರು.. ನಗರದ ಹುಳಿಯಾರ ರಸ್ತೆಯಲ್ಲಿ ಶನಿವಾರ ನೂತನ ಸಾರಿಗೆ ಘಟಕ ಉದ್ಘಾಟಿಸಿದ ಸಚಿವರ ರಾಮಲಿಂಗರೆಡ್ಡಿಗೆ ವಿವಿಧ ಬೇಡಿಕೆಗಳು ಈಡೇರಿಸುವಂತೆ ಮನವಿ ಸಲ್ಲಿಸಿ ಮಾತನಾಡಿದರು.ನಗರದಲ್ಲಿ ಸಾರಿಗೆ ಘಟಕ ಸ್ಥಾಪನೆಗೆ ಅನೇಕ ಹೋರಾಟಗಳು ನಡೆಸಿ, ಜಿಲ್ಲಾಧಿಕಾರಿಗೆ, ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಪ್ರತಿಫಲ ಸಾರಿಗೆ ಘಟಕ ಉದ್ಘಾಟನೆಯಾಗಿದೆ. ಈ ಸಾರಿಗೆ ಘಟಕದಿಂದ ಅಂತರಾಜ್ಯ ಸೇರಿ ಗ್ರಾಮೀಣ ಪ್ರದೇಶಗಳಿಗೂ ಸಾರಿಗೆ ಬಸ್ ಗಳ ವ್ಯವಸ್ಥೆ ಮಾಡುವಂತೆ ಸಾರಿಗೆ ಸಚಿವ ರಾಮಲಿಂಗರೆಡ್ಡಿಗೆ ಮನವಿ ಸಲ್ಲಿಸಲಾಗಿದೆ ಎಂದರು.