ತಾಲ್ಲೂಕಿನ ಮಲ್ಲಸಮುದ್ರ ಬಳಿ ಭಾನುವಾರ ಅಕ್ರಮವಾಗಿ ಸೇಂದಿ ಸಾಗಿಸುತ್ತಿದ್ದ ಆರೋಪಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳ ಮಾಲು ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ಯಾಸೆಂಜರ್ ಆಟೋದಲ್ಲಿ ಅಕ್ರಮವಾಗಿ ಸೇಂದಿ ಸಾಗಾಟ ಮಾಡುತ್ತಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಯನ್ನು ಮಾಲು ಸಮೇತವಾಗಿ ವಶಕ್ಕೆ ಪಡೆದು 17 ಸಾವಿರ ಬೆಲೆ ಬಾಳುವ 23 ಲೀಟರ್ ಅಕ್ರಮ ಸೇಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.