ನಗರದ ನೆಹರು ಸರ್ಕಲ್ ಸಮೀಪ 1ನೇ ಕ್ರಾಸ್ ನಲ್ಲಿ ರಸ್ತೆಯಲ್ಲ ತಗ್ಗು-ಗುಂಡಿಗಳು ಬಿದ್ದು ಮಳೆ ನೀರು ಸಂಗ್ರಹವಾಗಿ ಸಾರ್ವಜನಿಕರ ಸಂಚಾರಕ್ಕೆ ಕಿರಿಯಾಗಿರುವುದಕ್ಕೆ ಭಾನುವಾರ ನೀರು ನಿಂತಿರುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆಹರು ಸರ್ಕಲ್ 1 ನೇ ಕ್ರಾಸ್ ನಲ್ಲಿ ಆಸ್ಪತ್ರೆಗಳಿರುವುದರಿಂದ ರೋಗಿಗಳು ಸಂಚಾರ ಮಾಡುವ ರಸ್ತೆಯಲ್ಲ ತಗ್ಗು-ಗುಂಡಿಗಳು ಬಿದ್ದು ಮಳೆನೀರು ಸಂಗ್ರಹವಾಗಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ.ಕೂಡಲೇ ನಗರಸಭೆ ಅಧಿಕಾರಿಗಳು ಮಳೆ ನೀರು ತೆರವು ಮಾಡಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಾಮಾಜಿಕ ಜಾಲತಾಣ ದಲ್ಲಿ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.