ಬಾಗಲಕೋಟ ಜಿಲ್ಲೆಯ ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯವಸ್ತಗೊಂಡಿದೆ. ಹೌದು ಸೆ.೨೬ ರಂದು ಮುಂಜಾನೆ ೦೭ ಗಂಟೆಗೆ ಆರಂಭವಾದ ಮಳೆ ಸಾಯಂಕಾಲ ೪ ಗಂಟೆಯವರೆಗೂ ಬಿಟ್ಟು ಬಿಡದೇ ಸುರಿಯುತ್ತಿರುವದ್ದರಿಂದ ಬೀದಿ ಬದಿ ವ್ಯಾಪಾರಸ್ಥರ ಜೀವನ ಮತ್ತು ರೈತರ ಜೀವನ ಅಸ್ತವ್ಯಸ್ತ ಉಂಟಾಗಿದೆ. ಇನ್ನೂ ಶಾಲಾ ಕಾಲೇಜಿಗೆ ತೆರಳಿದ್ದ ವಿದ್ಯಾರ್ಥೀಗಳು ಸುರಿಯುವ ಮಳೆಯಲ್ಲಿಯೇ ತೇವಗೊಂಡು ಮನೆಯತ್ತ ಸಾಗಿದರು. ಇದು ಇಳಕಲ್ ವೋ ಅಥವಾ ಮಳೆನಾಡ ಎಂಬAತೆ ಭಾಸವಾಯಿತು.