ಹುಬ್ಬಳ್ಳಿ ಧಾರವಾಡ ಮಹಾನಗರದ ಮಾನ್ಯ ಪೊಲೀಸ್ ಆಯುಕ್ತರಾದ ಐಜಿಪಿ ಎನ್. ಶಶಿಕುಮಾರ್ ರವರು ಹುಬ್ಬಳ್ಳಿ ಕಾ ರಾಜಾ, ಶ್ರೀ ಗಜಾನನ ಉತ್ಸವ ಸಮಿತಿ ದಾಜಿಬಾನ ಪೇಟ್ ಹುಬ್ಬಳ್ಳಿ ಮಂಟಪಕ್ಕೆ ತಮ್ಮ ಕುಟುಂಬ ವ ಪರಿವಾರ ಸಮೇತ ಆಗಮಿಸಿ, ಹುಬ್ಬಳ್ಳಿ ಕಾ ರಾಜಾ ಶ್ರೀ ಗಣೇಶ ದೇವರ ದರ್ಶನಾಶೀರ್ವಾದ ಪಡೆದುಕೊಂಡರು.ಈ ಸಂದರ್ಭದಲ್ಲಿ, ಸಹಾಯಕ ಪೊಲೀಸ್ ಆಯುಕ್ತರಾದ ಶಿವಪ್ರಕಾಶ್ ನಾಯಕ ರವರು ಹಾಗೂ ಇತರ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.