ಸುಭಾಷ್ ನಗರ ಬಡಾವಣೆಗೆ ಮುಳ್ಳು ಹಂದಿ ಎಂಟ್ರಿ ಪಡೆದು ಆತಂಕ ಸೃಷ್ಟಿಯಾಗಿದೆ. ಈ ತನಕ ಚಿರತೆ ಕಾಟ ಎದುರಾಗಿತ್ತು. ಈಗ ಮುಳ್ಳು ಹಂದಿ ಕಾಣಿಸಿಕೊಂಡು ಬಡಾವಣೆ ನಾಗರಿಕರು ಮನೆಯಿಂದ ಹೊರಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಭಾಷ್ ನಗರದ ಶೋಭಾ ಗಾರ್ಡನ್ ಬಳಿ ದಂಡಿನ ಮಾರಮ್ಮ ದೇವಸ್ಥಾನದ ಎದುರು ತಡರಾತ್ರಿ ಮುಳ್ಳಂದಿ ಓಡಾಟ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರಿಯಾಗಿದೆ. ಸ್ಥಳೀಯರು ಈ ಮಾಹಿತಿಯನ್ನು ಅರಣ್ಯ ಇಲಾಖೆಗೆ ತಿಳಿಸಿದ್ದು, ಅರಣ್ಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.