ನಾಪೋಕ್ಲು :ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಪಾಲ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಬೆಳೆಗಳನ್ನು ತುಳಿದು ನಾಶ ಪಡಿಸಿ ಅಪಾರ ಪ್ರಮಾಣದಲ್ಲಿ ನಷ್ಟಉಂಟು ಮಾಡಿದ್ದು ಕೂಡಲೇ ಅರಣ್ಯ ಇಲಾಖೆ ಕಾಡಾನೆ ಹಾವಳಿ ನಿಯಂತ್ರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಎಡಪಾಲ ಗ್ರಾಮದ ಎರಟೆಂಡ ಮೊಹಮ್ಮದ್, ಹನೀಫಾ, ಸಂಶುದ್ದೀನ್,ಹಸ್ಸನ್, ಪಾಲಚಂಡ ಪೂವಿ ಸೇರಿದಂತೆ ಗ್ರಾಮದ ಮತ್ತಿತರರ ಬೆಳಗಾರರ ಗದ್ದೆ ತೋಟಗಳಿಗೆ ಲಗ್ಗೆ ಇಟ್ಟು ದಾಳಿ ನಡೆಸಿದ ಕಾಡಾನೆಗಳು ಕಾಫಿ ಬಾಳೆ,ಅಡಿಕೆ,ತೆಂಗಿನ ಗಿಡಗಳನ್ನು ತುಳಿದು ಅಪಾರ ಪ್ರಮಾಣದಲ್ಲಿ ಹಾನಿಪಡಿಸಿ ನಷ್ಟ ಉಂಟು ಮಾಡಿದೆ.ಎಡಪಾಲ ಗ್ರಾಮ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ಜನರು ಭಯ ಬೀತರಾಗಿದ್ದಾರೆ.